ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮಿಂದ ಸರ್ಕಾರ ರಚನೆ ಆಯ್ತು: ನಮ್ಮನ್ನೇ ಕೈ ಬಿಟ್ಟರು

ಬೆಂಗಳೂರು- ನಾನು ಹೋರಾಟದ ಹಿನ್ನಲೆಯಿಂದ ಬಂದವನು. ನಲವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇಲ್ಲಿ ಎಲ್ಲವನ್ನೂ ಎದುರಿಸಿದ್ದೇನೆ‌. ನನ್ನ ಅನರ್ಹತೆ ಬಗ್ಗೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ‌.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಉದ್ದೇಶ ಕರ್ನಾಟಕದಲ್ಲಿ ರಾಕ್ಷಸ ರಾಜಕಾರಣ ಪತನವಾಗಬೇಕಿತ್ತು‌. ಅದು ಆಗಿದೆ ವಿನಃ ನಾವು ಸಚಿವರಾಗಬೇಕೆಂಬ ಆಸೆಯಿಂದಲ್ಲ. ಅಂದು ಕ್ಷಿಪ್ರ ಕ್ರಾಂತಿಯಾಯಿತು‌. ಈ ಬಗ್ಗೆ ಕೆಲವರು ಅನಾವಶ್ಯಕವಾಗಿ ಏನೇನೋ ಮಾತಾಡ್ತಿದ್ದಾರೆ ಎಂದರು.

ಏನೋ ದೊಡ್ಡ ದುರಂತ ಆಗಿದೆ ಎಂದು ನಾನು ಭಾವಿಸಿಲ್ಲ. ರಾಜಕಾರಣವನ್ನು ನಾನು ಲಾಭ-ನಷ್ಟದ ವ್ಯವಹಾರವಾಗಿ ಸ್ವೀಕರಿಸಿಲ್ಲ. ನನ್ನ ವಕೀಲರ ಜೊತೆ ಚರ್ಚೆ ಮಾಡ್ತೀನಿ. ಸಾ.ರಾ ಮಹೇಶ್ ಬಗ್ಗೆ ಮಾತನಾಡಿ ಕೊಚ್ಚೆಗೆ ಪದೇ ಪದೇ ಕಲ್ಲೆಸೆದು ನನ್ನ ಬಿಳಿ ಧಿರಿಸು ಕೊಳೆ ಮಾಡಿಕೊಳ್ಳಲ್ಲ. ಅವನ್ಯಾರ್ರೀ ಸಾ.ರಾ ಮಹೇಶ? ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದು ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

Edited By : Nagaraj Tulugeri
PublicNext

PublicNext

01/12/2020 01:55 pm

Cinque Terre

59.24 K

Cinque Terre

10

ಸಂಬಂಧಿತ ಸುದ್ದಿ