ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿ ಜನಪ್ರತಿನಿಧಿಗಳ ಗುದ್ದಾಟ : DC ಗೆ ಅಶೋಕ ಕ್ಲಾಸ್

ಮೈಸೂರು: ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ಗುದ್ದಾಟದಿಂದ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದೆ.

ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಡಿಸಿ ರೋಹಿಣಿ ಸಿಂಧೂರಿ ಜನಪ್ರತಿನಿಧಿಗಳ ಗುದ್ದಾಟ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಅಶೋಕ್ ನಿಮ್ಮ ನಿಮ್ಮಗಳ ಗುದ್ದಾಟದಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ.

ಇದನ್ನು ನಾನು ಒಪ್ಪುತ್ತೇನೆ ಆದರೆ ಇಂದಿನಿಂದ ಅದು ಆಗಲ್ಲ. ನಿನ್ನೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ ಮಾಡಿ ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದ್ದೇನೆ.

ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಅಂತಾ ತಿಳಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ.

ಈ ವೇಳೆ ಜನರ ಅಹವಾಲುಗಳನ್ನು ಕೇಳಲಾಗುತ್ತದೆ ಎಂದು ಅಶೋಕ್ ಭರವಸೆ ಕೊಟ್ಟರು.

Edited By : Nirmala Aralikatti
PublicNext

PublicNext

30/11/2020 11:54 am

Cinque Terre

76.49 K

Cinque Terre

9

ಸಂಬಂಧಿತ ಸುದ್ದಿ