ಚಿಕ್ಕಮಗಳೂರು: ಉಗ್ರರಿಗೆ ಬಿರಿಯಾನಿ ಕೊಡೋ ಕಾಲ ಹೋಯಿತು, ಇನ್ನೇನಿದ್ದರೂ ಅವರನ್ನ ಮಸಣಕ್ಕೆ ಕಳಿಸುವುದಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗುಡುಗಿದ್ದಾರೆ.
ಮಂಗಳೂರಿನ ವಿವಾದಾತ್ಮಕ ಗೋಡೆ ಬರಹ ಪ್ರಕರಣದ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ಜಮ್ಮು-ಕಾಶ್ಮೀರದಲ್ಲಿ ಉಗ್ರರ ತಲೆ-ಬಾಲ ಕತ್ತರಿಸಿದ್ದು, ಇಲ್ಲಿ ಬಾಲ ಬಿಚ್ಚಿದರೂ ಅದೇ ಗತಿ ಅನ್ನೋದು ನೆನಪಿರಲಿ. ಈಗ ಉಗ್ರರನ್ನು ಸ್ಮಶಾನಕ್ಕೆ ಕಳಿಸುವ ಕೆಲಸವನ್ನ ಪೊಲೀಸ್, ಸೇನೆ ಮಾಡುತ್ತಿದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
PublicNext
29/11/2020 03:55 pm