ಹಾಸನ: ಆ ನಿಂಬೆಹಣ್ಣನ್ನು ಪ್ರೀತಂಗೌಡರ ನಿಂಬೆಹಣ್ಣು ಹೆದರಿಸುತ್ತೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಗ್ಗೆ ಲೇವಡಿ ಮಾಡಿದ್ದಾರೆ.
ಹಾಸನದ ಚನ್ನರಾಯಪಟ್ಟಣದಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಆ ನಿಂಬೆಹಣ್ಣು ತೋರಿಸಿದರೆ ರಾಜ್ಯದ ಎಂತೆಂತಹ ನಾಯಕರೇ ತತ್ತರಿಸಿ ಹೋಗುತ್ತಾರೆ. ಆದರೆ ಆ ನಿಂಬೆಹಣ್ಣಿನ ವಿರುದ್ಧ ನಿಂಬೆಹಣ್ಣು ತೋರಿಸಿ ಕಂಟ್ರೋಲ್ ಮಾಡುವ ಶಕ್ತಿ ಪ್ರೀತಂಗೌಡ ಅವರಿಗೆ ಮಾತ್ರ ಇದೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನಾವು ನೀಡುತ್ತೇವೆ ಎಂದು ವ್ಯಂಗ್ಯವಾಡಿದರು.
PublicNext
28/11/2020 05:08 pm