ಬೆಂಗಳೂರು: ಶಾಸಕರ ಸಂಖ್ಯೆ ಒಟ್ಟು 225 ಇದೆ. ಇವರ ಪೈಕಿ ಸಚಿವರು, ಮಂತ್ರಿಗಳ ಸಂಖ್ಯೆ ಶೇಕಡಾ 15 ರಷ್ಟು ಮೀರಿದೆ ಎಂಬ ಕಾರಣಕ್ಕೆ ಮಂತ್ರಿಗಳ ಸಮಾನ ಶ್ರೇಣಿಯೊಂದಿಗೆ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಮಾಡಿದೆ. ಈ ಅರ್ಜಿ ಸಂವಿಧಾನದ 164 (1) (ಎ) ವಿಧಿ ಉಲ್ಲಂಘನೆಯಾಗಿದೆ ಎಂದಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ಡಾ.ಕೆ.ಬಿ.ವಿಜಯ್‌ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಅಧ್ಯಕ್ಷರ ಹುದ್ದೆಗೆ ಸಮನಾಗಿರುವುದನ್ನು ತೋರಿಸುವುದಕ್ಕಾಗಿ ಯಾವ ಉಲ್ಲೇಖಗಳನ್ನೂ ಸಹ ದಾಖಲೆಯಲ್ಲಿ ಇರಿಸಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ. ಮಂತ್ರಿಗಳಾಗಲು ಅವರಿಗೆ ಸಾಧ್ಯವಿಲ್ಲ. ಏಕೆಂದರೆ ಮಂತ್ರಿಗಳಿಗೆ ಸಮಾನವಾದ ಸಂಬಳ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ.. ಪ್ರಸ್ತುತ ಇರುವ 28 ಸಚಿವರ ಸಂಖ್ಯೆ ಒಟ್ಟೂ ಶಾಸಕರ ಸಂಖ್ಯೆಗಿಂತ ಶೇಕಡಾ 15 ಕ್ಕಿಂತ ಹೆಚ್ಚಿಲ್ಲ ಹಾಗಾಗಿ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ನಿಗಮ ಹಾಗೂ ಮಂಡಳಿಗಳ ನೇಮಕಾತಿಯೊಂದಿಗೆ, ಮಂತ್ರಿಗಳ ಶೇಕಡಾವಾರು ಪ್ರಮಾಣವು 30 ಕ್ಕೆ ಏರುತ್ತದೆ. ಸಂವಿಧಾನಿಕ ನಿಯಮದ ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ ಈ ನೇಮಕಾತಿಗಳೊಂದಿಗೆ ಸಾರ್ವಜನಿಕ ಹಣ ಸಹ ದುರುಪಯೋಗವಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಸಚಿವರಿಗೆ ಸಮಾನವಾದ ಸವಲತ್ತುಗಳನ್ನು ನೀಡಲಾಗಿರುವುದರಿಂದ ಎಲ್ಲಾ ಅಧ್ಯಕ್ಷರನ್ನು ಸಚಿವರಂತೆ ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಅರ್ಜಿದಾರರು ಈ ವರ್ಷದ ಜನವರಿಯಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದು ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ಸಂಬಳ, ಭತ್ಯೆ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1963-1999ರಲ್ಲಿ ತಿದ್ದುಪಡಿ ಮಾಡಲಾಗಿರುವ ಕಾಯ್ದೆಯು ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಅನುಮೋದನೆ ನೀಡುತ್ತದೆ.
ಆದಾಗ್ಯೂ, ಆ ತೀರ್ಪಿನಲ್ಲಿ ನಿರ್ದಿಷ್ಟ ಶೋಧನೆಗಳಿವೆ ಎಂದು ನ್ಯಾಯಪೀಠ ಹೇಳಿದೆ. "ಈ ಅರ್ಜಿಗೆ ಸಂಬಂಧಿಸಿದಂತೆ, ಅರ್ಜಿದಾರರು ಅಧ್ಯಕ್ಷರ ಹುದ್ದೆಗಳು ಸಚಿವರಿಗೆ ಸಮಾನವೆಂದು ತೋರಿಸಲು ಸೂಕ್ತ ಸಾಕ್ಷ್ಯಗಳನ್ನು ಉಲ್ಲೇಖಿಸಿಲ್ಲ" ಎಂದು ಅದು ಹೇಳಿದೆ.
PublicNext
28/11/2020 02:35 pm