ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅವನ್ಯಾವನೋ ಸತ್ರೆ ಅಂತ ನೀವು ನನಗೆ ಪ್ರಶ್ನೆ ಕೇಳಿದ್ರೆ?

ಬೆಳಗಾವಿ- ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ‌.

ರಾಜ್ಯ ಬಿಜೆಪಿಯಲ್ಲಿ ಒಂದು ಕೋಟಿ ಸದಸ್ಯರಿದ್ದಾರೆ. ಅವನ್ಯಾವನೋ ಸತ್ರೆ ನೀವು ನನಗೆ ಪ್ರಶ್ನೆ ಕೇಳಿದ್ರೆ ಎಂದು ಮಾಧ್ಯಮದವರನ್ನೇ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಸಂತೋಷ್ ಅವರು ಮಾತ್ರೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದರು.

ರಾಜಕೀಯ ಒತ್ತಡದ ಬಗ್ಗೆ ನನಗೇನು ಗೊತ್ತು?. ಇಂತಹ ವ್ಯಕ್ತಿ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿ ಅಂತವರ ವಿರುದ್ಧ ದೂರು ನೀಡಬಹುದು. ವೈಯಕ್ತಿಕ ಸಮಸ್ಯೆ ಏನು ಅಂತಾ ಅವರ ಮನೆಯವರನ್ನೇ ಕೇಳಬೇಕು. ಅದು ಬಿಟ್ಟು ಬಿಜೆಪಿ ಮೇಲೆ ಆಪಾದನೆ ಮಾಡ್ತಾ ಕೂತರೆ ಹೇಗೆ? ಇದನ್ನ ಕಾಂಗ್ರೆಸ್ಸಿನವರು, ಜೆಡಿಎಸ್ ನವರು ಮಾಡಿದ್ದಾರೆ ಅಂತ ಹೇಳೋಕೆ ಬರುತ್ತಾ? ಎಂದು ಈಶ್ವರಪ್ಪ ಪ್ರಶ್ನಿಸಿದರು‌.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ವಿಚಾರವಾಗಿ ಮುಠ್ಠಾಳತನದ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ನೀಡೋದಕ್ಕೆ ನಾಚಿಕೆಯಾಗಬೇಕು. ಅವರ ಬಳಿ ವಿಡಿಯೋ ಇದ್ದರೆ ಬಹಿರಂಗಪಡಿಸಲಿ. ಏನೇ ಆಪಾದನೆ ಮಾಡಿದರೂ ಅದಕ್ಕೆ ದಾಖಲೆ ಬೇಕು. ಅವರು ಪ್ರಚಾರಕ್ಕಾಗಿ ಈ ರೀತಿ ಮಾತಾಡ್ತಿದ್ದಾರೆ ಎಂದ ಈಶ್ವರಪ್ಪ ಡಿಕೆಶಿ ವಿರುದ್ಧ ಗರಂ ಆಗಿದ್ದರು.

Edited By : Nagaraj Tulugeri
PublicNext

PublicNext

28/11/2020 02:23 pm

Cinque Terre

62.6 K

Cinque Terre

6