ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ.ಬಂಗಾಳದಲ್ಲಿ ಕಮಲ ಅರಳಿದರೆ: ಪೊಲೀಸರು ಬೂಟು ನೆಕ್ಕುವಂತೆ ಮಾಡುವೆ : ರಾಜು ಬ್ಯಾನರ್ಜಿ

ದುರ್ಗಾಪುರ (ಪ.ಬಂಗಾಳ) : ಪಶ್ಚಿಮ ಬಂಗಾಳದಲ್ಲಿ ಗೂಂಡಾಗಿರಿ ಆಡಳಿತ ಇದ್ದರೂ ಏನೂ ಮಾಡದೆ ಕೈಕಟ್ಟಿ ಇರುವ ಪೊಲೀಸರಿಗೆ ನಾವು ಅಧಿಕಾರಕ್ಕೆ ಬಂದ ಬಳಿಕ ಬೂಟು ನೆಕ್ಕಿಸುತ್ತೇವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ರಾಜು ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದುರ್ಗಾಪುರದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಗೂಂಡಾಗಳ ರಾಜ್ಯವಾದಂತಾಗಿದೆ.

ಪೊಲೀಸರು ಇವರನ್ನು ನಿಗ್ರಹಿಸಲು ಏನೂ ಮಾಡುತ್ತಿಲ್ಲ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಇಂತಹ ಪೊಲೀಸರಿಗೆ ಯಾವ ನೆರವೂ ಸಿಕ್ಕುವುದಿಲ್ಲ ಅವರು ಬೂಟು ನೆಕ್ಕುವಂತೆ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಬಂಗಾಳದಲ್ಲಿ ಮಹಿಳೆಯರಿಗೇ ಸುರಕ್ಷತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿಹೋಗಿದೆ' ಎಂದು ಆರ್ಭಟಿಸಿದ ಅವರು, 2021ರ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

ಮಹಿಳೆಯರ ವಿರುದ್ಧ ಅಪರಾಧ ಎಸಗಿದವರನ್ನ ಜೈಲಿಗೆ ಕಳುಹಿಸಲಾಗುತ್ತದೆ. ಕಾನೂನು ವ್ಯವಸ್ಥೆಯನ್ನ ಈ ರಾಜ್ಯದಲ್ಲಿ ನೆಲಸುತ್ತದೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

25/11/2020 10:02 pm

Cinque Terre

98.6 K

Cinque Terre

6