ಬೆಂಗಳೂರು: ರಾಜ್ಯ ಸರ್ಕಾರವು ಸಂಪುಟ ವಿಸ್ತರಣೆಗೂ ಮುನ್ನವೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಿಸಿ ಆದೇಶ ಹೊರಡಿಸಿದೆ.
ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಈ ಮಧ್ಯೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಿಸಿ ಆದೇಶ ಹೊರಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿಗಮ ಮಂಡಳಿಗಳ ನೂತನ ಅಧ್ಯಕ್ಷರು
* ಬಿ.ಎಸ್. ಪರಮಶಿವಯ್ಯ - ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
* ಎಸ್.ಆರ್.ವಿಶ್ವನಾಥ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
* ಚಂದು ಪಾಟೀಲ್ - ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ
* ಬಿ.ಸಿ.ನಾಗೇಶ್ - ಕಾರ್ಮಿಕ ಕಲ್ಯಾಣ ಮಂಡಳಿ
* ಬಿ.ಕೆ. ಮಂಜುನಾಥ್ - ನಾರು ಅಭಿವೃದ್ಧಿ ಮಂಡಳಿ
* ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ - ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
* ಕಿರಣ್ ಕುಮಾರ್ - ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
* ತಾರಾ ಅನುರಾಧ - ಅರಣ್ಯ ಅಭಿವೃದ್ಧಿ ನಿಗಮ
* ಎಸ್.ಆರ್.ಗೌಡ - ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
* ಕೆ.ವಿ. ನಾಗರಾಜ್ - ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
* ತಿಪ್ಪೇಸ್ವಾಮಿ - ಕಾಡಾ ನಿಗಮ
* ರಘು ಆರ್ - ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
* ಬಾಬು ಪತ್ತಾರ್ - ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ
* ಜೆ.ಕೆ ಗಿರೀಶ್ ಉಪ್ಪಾರ್ - ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ
* ಎಸ್ ನರೇಶ್ ಕುಮಾರ್ - ಸವಿತಾ ಸಮುದಾಯ ಅಭಿವೃದ್ಧಿ ನಿಗಮ
* ತಮ್ಮೇಶ ಗೌಡ ಎಚ್.ಸಿ - ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
* ದುರ್ಯೋಧನ ಮಹಲಿಂಗಪ್ಪ - ಡಾ.ಬಿ.ಆರ್.ಅಬೇಂಡ್ಕರ್ ನಿಗಮ ನಿಯಮಿತ
* ಎಚ್. ಹನುಮಂತಪ್ಪ - ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
* ಎಂ ರಾಮಚಂದ್ರ - ಕೇಂದ್ರ ಪರಿಹಾರ ಸಮಿತಿ
* ಸಿ. ಮುನಿಕೃಷ್ಣ - ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ
* ಸಿದ್ದನಗೌಡ ಈರ್ಶವರಗೌಡ ಚಿಕ್ಕನಗೌಡ್ರು - ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ
* ಲಿಂಗರೆಡ್ಡಿ ಬಿ.ಎನ್. ಗುರುಂಡಗೌಡ ಬಾಸರೆಟ್ಟಿ - ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ
* ವಿಜುಗೌಡ ಎಸ್ ಪಾಟೀಲ್ - ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ
PublicNext
24/11/2020 11:05 pm