ನವದೆಹಲಿ: ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮತ್ತೆ ಚೀನಾದ 43 ಆ್ಯಪ್‍ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಭಾರತ- ಚೀನಾದ ನಡುವೆ ನಡೆದ ಗಲ್ವಾನ್ ಘರ್ಷಣೆಯ ನಂತರ ಕಳೆದ ಜೂನ್ 29 ರಂದು ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ಬ್ಯಾನ್ ಮಾಡಿತ್ತು. ನಂತರ ಈ 59 ಆ್ಯಪ್‍ಗಳನ್ನು ಒಳಗೊಂಡಂತೆ ಸೆಪ್ಟಂಬರ್ 2ರಂದು 118 ಆ್ಯಪ್‍ಗಳನ್ನು ನಿಷೇಧ ಮಾಡಲಾಗಿತ್ತು. ಸದ್ಯ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು 43 ಆ್ಯಪ್‍ಗಳನ್ನು ನಿಷೇಧ ಮಾಡುವಂತೆ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 43 ಆ್ಯಪ್‍ಗಳನ್ನು ನಿಷೇಧ ಮಾಡಿದೆ ಎಂದು ತಿಳಿಸಿದೆ.
PublicNext
24/11/2020 07:03 pm