ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲುಪಾಲಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನಾಲ್ಕು ವರ್ಷದ ಜೈಲು ವಾಸದಲ್ಲಿ ಶಶಿಕಾಲ ಅವರು ಸುಲಲಿತ ಕನ್ನಡ ಕಲಿತಿದ್ದಾರೆ. ಅಷ್ಟೇ ಅಲ್ಲದೆ ಕೃಷಿ, ಡಿಸೈನಿಂಗ್ನಲ್ಲಿ ಸೈ ಎನಿಸಿಕೊಂಡಿದ್ದಾರಂತೆ.
ಶಶಿಕಲಾ ಅಲಿಯಾಸ್ ಚೆನ್ನಮ್ಮಾ ಅವರು 2017ರ ಫೆಬ್ರುವರಿ 15ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದರು. ಸದ್ಯ ಕೋರ್ಟ್ ಆದೇಶದ ಮೇರೆಗೆ 10 ಕೋಟಿ ರೂ. ದಂಡ ಪಾವತಿಸಿ 2021ರ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ.
ಶಶಿಕಲಾ ಅವರು ಸ್ವತಃ ಗುದ್ದಲಿ ಹಿಡಿದು ಅರ್ಧ ಎಕರೆ ಜಮೀನಿನಲ್ಲಿ ಪಪ್ಪಾಯ ನೆಟ್ಟು ಮಿಶ್ರ ಬೆಳೆ ಪದ್ಧತಿಯಲ್ಲಿ ಬೆಳೆ ತೆಗೆದಿದ್ದಾರೆ. ಈ ಮೂಲಕ ಒಂದು ಟನ್ ಪಪ್ಪಾಯ ಬೆಳೆದಿದ್ದಾರಂತೆ. ಅಷ್ಟೇ ಅಲ್ಲದೆ ಜೈಲಿನ ತೋಟದಲ್ಲಿಯೇ ತೊಗರಿ, ಬೀನ್ಸ್, ಬದನೆಕಾಯಿ, ನುಗ್ಗೆಕಾಯಿ ಬೆಳೆ ಕೂಡ ಬೆಳೆದು ಸೈ ಎನಿಸಿಕೊಂಡಿದ್ದಾರೆ ಎನ್ನಲಾಗಿದೆ.
PublicNext
23/11/2020 06:14 pm