ಮಾಸ್ಕೋ: ಅಮೆರಿಕ ಚುನಾವಣೆ ಬಗ್ಗೆ ಹೊಸ ವರಸೆ ತೆಗೆದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕಾದ ಯಾವ ನಾಯಕನೊಂದಿಗಾದರೂ ತಾವು ಕಾರ್ಯನಿರ್ವಹಿಸಲು ಸಿದ್ಧ. ಆದರೆ, ಅಮೆರಿಕಾ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಅವರ ಗೆಲುವನ್ನು ಮಾನ್ಯ ಮಾಡಲು ನಾವು ತಯಾರಿಲ್ಲ ಎಂದು ಹೇಳಿದ್ದಾರೆ.
ಜನರ ವಿಶ್ವಾಸ ಹೊಂದಿರುವ ನಾಯಕ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂದು ಪುಟಿನ್ ಹೇಳಿದ್ದಾರೆ. ಆ ಗೆಲುವನ್ನು ಪ್ರತಿಪಕ್ಷಗಳು ಸಹ ಒಪ್ಪಬೇಕು. ಫಲಿತಾಂಶವನ್ನು ಕಾನೂನುಬದ್ಧವಾಗಿ ಪ್ರಕಟಿಸಿದರೆ ಅದನ್ನು ನಾವು ಮಾನ್ಯ ಮಾಡುವುದಾಗಿ ಹೇಳಿದ್ದಾರೆ.
ನವೆಂಬರ್ 8ರಂದು ನಡೆದ ಮತ ಏಣಿಕೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ 306 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಹಾಲಿ ಅಧ್ಯಕ್ಷ, ಡೊನಾಲ್ಡ್ ಟ್ರಂಪ್ ಅವರು 232 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
PublicNext
23/11/2020 03:39 pm