ವಾಷಿಂಗ್ಟನ್- ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಸುಣ್ಣವಾದ ಟ್ರಂಪ್ ಅದರಿಂದ ಇನ್ನೂ ಹೊರಬಂದಿಲ್ಲ. ಹೀಗಾಗಿ ಅಮೆರಿಕದ ಆಡಳಿತಕ್ಕೂ ತನಗೂ ಸಂಬಂಧ ಇಲ್ಲಂದಂತೆ ಇದ್ದಾರೆ ಟ್ರಂಪ್.
ಈ ನಡುವೆ ಟ್ರಂಪ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿ 20 ಸಭೆಗೆ ಟ್ರಂಪ್ ಚಕ್ಕರ್ ಹೊಡೆದಿದ್ದಾರೆ. ಜೊತೆಗೆ ಅದೇ ವೇಳೆಯಲ್ಲಿ ಗಾಲ್ಫ್ ಆಡಿ ಕಾಲಹರಣ ಮಾಡಿದ್ದಾರೆ. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಅಮೆರಿಕ ಕೊರೊನಾ ಅಬ್ಬರಕ್ಕೆ ತತ್ತರಿಸಿದೆ. ಹಾಗೂ ಅಲ್ಲಿ ಕೊರೊನಾ 2ನೇ ಅಲೆ ಶುರುವಾಗಿದೆ. ಈ ಬಗ್ಗೆ ಚರ್ಚಿಸಲೆಂದೇ ಜಿ 20 ಶೃಂಗ ಸಭೆ ಆಯೋಜಿಸಲಾಗಿತ್ತು. ಈ ಸಭೆ ಹಾಜರಾಗದೇ ನಿರ್ಲಕ್ಷ್ಯ ಮಾಡಿದ ಡೊನಾಲ್ಡ್ ಟ್ರಂಪ್ ವರ್ಜೀನಿಯಾದ ನ್ಯಾಶನಲ್ ಗಾಲ್ಫ್ ಕ್ಲಬ್ನಲ್ಲಿ ಗಾಲ್ಫ್ ಆಡಿದ ಟ್ರಂಪ್ ಅಲ್ಲಿಯೇ ಕಾಲ ಕಳೆದಿದ್ದಾರೆ.
PublicNext
22/11/2020 10:47 pm