ಬಳ್ಳಾರಿ: ಸಿಬಿಐ ತನಿಖಾ ಸಂಸ್ಥೆಯನ್ನು ಮುಂದಿಟ್ಟುಕೊಂಟು ಬಿಜೆಪಿಯವರು ನನ್ನನ್ನು ಕಟ್ಟಿ ಹಾಕಲು ಮುಂದಾಗಿದ್ದಾರೆ. ಇದೆಲ್ಲ ನಿನ್ನೆ ಮೊನ್ನೆಯದಲ್ಲ. ಬಹು ಹಿಂದಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಬರುವ ದಿನಗಳಲ್ಲಿ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅಕ್ರಮ ಆಸ್ತಿ ಸಂಪಾದನೆ ಸೇರಿದಂತೆ ನಾನಾ ಸುಳ್ಳು ಕಾರಣಗಳನ್ನು ಇಟ್ಟುಕೊಂಡು ಸಿಬಿಐದವರು ನೋಟೀಸ್ ನೀಡಿದ್ದಾರೆ. ಇದಕ್ಕೆಲ್ಲ ಉತ್ತರ ನೀಡುತ್ತೇನೆ. ಹೆದರುವ ಮಾತೇ ಇಲ್ಲ. ಪೂರ್ವನಿಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸಮಯಾವಕಾಶ ಕೇಳಿದ್ದೇನೆ. ಕಾನೂನಿಗೆ ಯಾವತ್ತೂ ಗೌರವ ಕೊಡುವ ವ್ಯಕ್ತಿ ನಾನು, ಬಿಜೆಪಿ ಅವರ ಬೆದರಿಕೆಗೆ ಹೆದರುವ ಜಾಯಮಾನ ನನ್ನದಲ್ಲ ಎಂದರು.
PublicNext
22/11/2020 07:08 pm