ಬೆಳಗಾವಿ- ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಸಚಿವ ಡಿ ಸುಧಾಕರ್ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ತೆರಳಿದ್ದರು. ನಂತರ ಕೆಲವು ವಾರ್ಡುಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ರೋಗಿಗಳು ಸಚಿವ ಸುಧಾಕರ್ ಮುಂದೆ ಹಲವಾರು ದೂರುಗಳನ್ನು ಹೇಳಿದ್ದಾರೆ. ವೈದ್ಯರು ಸರಿಯಾದ ಸಮಯಕ್ಕೆ ಬರೋದಿಲ್ಲ. ಸ್ವಚ್ಛತೆ ಇಲ್ಲ . ಆಸ್ಪತ್ರೆಯಲ್ಲಿ ವಿಪರೀತ ಸೊಳ್ಳೆ ಕಾಟ ಇದೆ ಸರ್ ಎನ್ನುತ್ತ ಗೋಳು ತೋಡಿಕೊಂಡರು.
ಇದಕ್ಕೆ ಕೆಂಡಾಮಂಡಲರಾದ ಸಚಿವ ಸುಧಾಕರ್ ಅಲ್ಲಿದ್ದ ಬಿಮ್ಸ್ ನಿರ್ದೇಶಕ ವಿನಯ್ ದಾಸ್ತಿಕೊಪ್ಪ ಹಾಗೂ ಇತರ ವೈದ್ಯರ ಮೇಲೆ ಹರಿಹಾಯ್ದರು. ಎಲ್ಲಾದರೂ ದನ ಕಾಯೋಕೆ ಹೋಗಿ ಎಂದು ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಅಸಮಾಧಾನಿತರಾಗಿದ್ದರು.
PublicNext
21/11/2020 07:28 pm