ಚನ್ನಪಟ್ಟಣ- ಕಾಂಗ್ರೆಸ್ ಜೊತೆ ಸರ್ಕಾರ ನಡೆಸಿ ನನಗೂ ಸಾಕಾಗಿ ಹೋಗಿತ್ತು. ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು. ಹೀಗಾಗಿ ತಲೆ ಕೆಡಿಸಿಕೊಳ್ಳದೇ ಅಮೆರಿಕ ಪ್ರವಾಸಕ್ಕೆ ತೆರಳಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಿಂದಿನ ಸರ್ಕಾರ ಪತನಗೊಂಡ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ತಾಲೂಕಿನ ಮಹದೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಪತನದ ವೇಳೆ ಅಮೆರಿಕಕ್ಕೆ ಹೋಗದಂತೆ ಆಪ್ತರು ಸಲಹೆ ನೀಡಿದ್ದರು. ಆದ್ರೆ ಆದಿಚುಂಚನಗಿರಿ ಶ್ರೀಗಳ ಆಹ್ವಾನದ ಮೇರೆಗೆ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆಗೆ ಹೋಗಿದ್ದೆ ಎಂದು ತಿಳಿಸಿದರು.
ಅಧಿಕಾರಕ್ಕೆ ಸಂಬಂಧಿಸದಿರುವವರು, ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡಿದ್ದರು. ಅಂದ ಮೇಲೆ ಸಿಎಂ ಆಗಿದ್ದ ನಾನೂ ಅದೇ ರೀತಿ ಮಾಡಬಹುದಿತ್ತು. ಆದರೆ ಈ ಸರ್ಕಾರದ ಸಹವಾಸವೇ ಬೇಡ ಎಂದು ಸುಮ್ಮನಾದೆ ಎನ್ನುವ ಮೂಲಕ ಮೈತ್ರಿ ಸರ್ಕಾರ ಪತನದ ವೇಳೆ ನಡೆದ ಸತ್ಯವನ್ನು ಬಹಿರಂವಾಗಿ ಹೇಳಿದರು.
PublicNext
21/11/2020 05:20 pm