ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್, ಹಳ್ಳಿ ಹಳ್ಳಿಗಳಲ್ಲೂ ಶೀಘ್ರದಲ್ಲೇ ಜನೌಷಧಿ ಕೇಂದ್ರ ಆರಂಭ

ಗ್ರಾಮೀಣ ಜನರು ಆರೋಗ್ಯ ರಕ್ಷಣೆಗಾಗಿ ವೈದ್ಯರು ನೀಡೋ ಮಾತ್ರೆಗಳ ಚೀಟಿ ಹಿಡಿದು ನಗರದ ಔಷಧಿ ಮಳಿಗೆಗಳ ಎಡೆಗೆ ಹೋಗೋ ಅನಿವಾರ್ಯತೆ ಶೀಘ್ರದಲ್ಲೇ ಜನರಿಗೆ ತಪ್ಪಲಿದೆ.

ಹೌದು ! ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿ ಹಳ್ಳಿಗಳಲ್ಲೂ ಜನೌಷಧಿ ಮಳಿಗೆಗಳನ್ನ ಸ್ಥಾಪಿಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದ್ದಾರೆ.

ಶುಕ್ರವಾರ ವಿಜಯಪುರದ ವೀರರಾಣಿ ಕಿತ್ತೂರು ಚನ್ನಮ್ಮ ಸಭಾಂಗಣದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರ ಇಲಾಖೆ, ವಿಜಯಪುರ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಗಳ ಆಶ್ರಯದಲ್ಲಿ ಜರುಗಿದ 67ನೇಯ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಸಮಾರೋಪ ಸಮಾರಂಭದಲ್ಲಿ ಅತಿಯಾಗಿ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.

ಗ್ರಾಮೀಣ ಜನರ ಅನುಕೂಲಕ್ಕಾಗಿ ಜನೌಷಧಿ ಮಳಿಗೆಗಳನ್ನ ಆರಂಭಿಸಿ ಕಡಿಮೆ ದರದಲ್ಲಿ ಔಷಧಿ ಪಡೆಯುವ ಸೌಲಭ್ಯವನ್ನು ಶೀಘ್ರದಲ್ಲೇ ರೂಪಿಸಲು ಸರ್ಕಾರ ಮುಂದಾಗಿದೆ.

Edited By :
PublicNext

PublicNext

21/11/2020 03:19 pm

Cinque Terre

59.94 K

Cinque Terre

2