ಚೆನ್ನೈ: ಇತ್ತೀಚೆಗಷ್ಟೇ ಸಂಭವಿಸಿದ ಕಾರು ಅಪಘಾತದಲ್ಲಿ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. ಈ ವಿಚಾರವಾಗಿ ಅನೇಕ ನೆಟ್ಟಿಗರು ಖುಷ್ಬೂ ಅವರ ಕಾಲೆಳೆದಿದ್ದರು.
ಖುಷ್ಬೂ ಅತ್ಯುತ್ತಮ ನಟಿ ಎಂಬುದನ್ನು ದೃಢಪಡಿಸುವ ಫೋಟೋಗಳಿವು. ಆತ್ಮೀಯರೆ ಸ್ಕ್ರಿಪ್ಟ್ ಅನ್ನು ಸರಿಯಾಗಿ ಬರೆಯಿರಿ ಎಂದು ವ್ಯಂಗ್ಯಚಿತ್ರಕಾರ ಬಾಲ ಎಂಬವದರು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೆ ಅನೇಕರು ಖುಷ್ಬೂ ಅವರ ಕಾರು ಅಪಘಾತದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖಷ್ಬೂ, 'ನಿಮಗೆ ಧೈರ್ಯವಿದ್ದರೆ ನೀವೇ ಅಪಘಾತವನ್ನು ಸೃಷ್ಟಿಸಿ ಎದುರಿಸಲು ಪ್ರಯತ್ನಿಸಿ. ನೀವು ಸಾವನ್ನ ಎದುರಿಸಿದಾಗ ನಿಮ್ಮ ಪ್ಯಾಂಟ್ ಒದ್ದೆಯಾಗುತ್ತದೆ ಎನ್ನುವುದು ನನಗೆ ಖಾತ್ರಿಯಿದೆ. ಏಕೆಂದರೆ ನೀವು ನನ್ನಂತೆ ಧೈರ್ಯಶಾಲಿಗಳಲ್ಲ" ಎಂದು ಕಿಡಿಕಾರಿದ್ದಾರೆ.
PublicNext
20/11/2020 12:48 pm