ಬೆಂಗಳೂರು: ಸಿಎಂ ಮಾದ್ಯಮ ಸಲಹೆಗಾರ ಸ್ಥಾನಕ್ಕೆ ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಸಿಎಂ ಬಿಎಸ್ವೈಗೆ ಮಾಧ್ಯಮ ಸಲಹೆಗಾರರಾಗಿದ್ದರು. ಮಹದೇವ್ ಪ್ರಕಾಶ್ ಇದೀಗ ದಿಢೀರ್ ರಾಜೀನಾಮೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮುಂಚೆ ಇದೇ ಹುದ್ದೆಯಲ್ಲಿದ್ದ ಹಿರಿಯ ಪತ್ರಕರ್ತ ಎಂ.ಬಿ ಮರಂಕಲ್ ಅವರನ್ನು ಇತ್ತೀಚೆಗಷ್ಟೇ ಸಿಎಂ ಬಿಎಸ್ವೈ ಅವರು ಹುದ್ದೆಯಿಂದ ತೆರವುಗೊಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಮಹದೇವ್ ಪ್ರಕಾಶ್ ಕೂಡಾ ಸಿಎಂ ಮಾಧ್ಯಮ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಮಹದೇವ್ ಪ್ರಕಾಶ್ ಅವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ನಾನು ಸಿಎಂಗೆ ಮಾಧ್ಯಮ ಸಲಹೆಗಾರನಾಗಿರುವುದರಿಂದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಲ್ಲ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ನಾನು ನಿರಾಕರಿಸುತ್ತಿದ್ದೇನೆ. ಎಂದು ಹೇಳುವ ಮೂಲಕ ಮಹದೇವ್ ಪ್ರಕಾಶ್ ಸುದ್ದಿಯಾಗಿದ್ದರು. ಆದರೆ ಇದೀಗ ವೈಯಕ್ತಿಕ ಕಾರಣ ನೀಡಿ ಸಿಎಂ ಮಾಧ್ಯಮ ಸಲಹೆಗಾರ ಸ್ಥಾನಕ್ಕೆ ಮಹದೇವ್ ಪ್ರಕಾಶ್ ರಾಜೀನಾಮೆ ನೀಡಿದ್ದು, ವಿಧಾನ ಸೌಧದ ಪಡಸಾಲೆಯಲ್ಲಿ ಆಸಕ್ತಿ ಕೆರಳಿಸಿದೆ.
PublicNext
19/11/2020 06:57 pm