ಬೆಂಗಳೂರು: ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.
ಈಶ್ವರ್ ಖಂಡ್ರೆ ಅವರ ವಿರುದ್ಧ ಡಿ.ಕೆ ಸಿದ್ರಾಮ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ವೇಳೆ ಹಾಜರಾಗದ ಖಂಡ್ರೆ ಅವರಿಗೆ ಹೈಕೋರ್ಟ್ ದಂಡ ವಿಧಿಸಿ ಗೈರು ಹಾಜರಿಯನ್ನು ಮನ್ನಿಸಿದೆ. ಅಷ್ಟೇ ಅಲ್ಲದೆ ದಂಡದ ಮೊತ್ತ 5 ಲಕ್ಷ ರೂ.ಗಳನ್ನು ಸಿಎಂ ಕೋವಿಡ್-19 ನಿಧಿಗೆ ನೀಡುವಂತೆ ಸೂಚಿಸಿದೆ.
ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ವ್ಯಾಪಕ ಅಕ್ರಮ ನಡೆಸಿದ್ದಾರೆ. ಅವರು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿಲ್ಲ. ಹೀಗಾಗಿ ಈಶ್ವರ್ ಖಂಡ್ರೆ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಸಿದ್ರಾಮ ನ್ಯಾಯಾಲಕ್ಕೆ ಮನವಿ ಮಾಡಿದ್ದರು. ಈ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಈಶ್ವರ್ ಖಂಡ್ರೆಯವರಿಗೆ ನೋಟಿಸ್ ನೀಡಿತ್ತು. ಆದರೆ ನೋಟಿಸ್ ನೀಡಿದ್ದರೂ ಈಶ್ವರ್ ಖಂಡ್ರೆ ವಿಚಾರಣೆಗೆ ಗೈರಾದ ಕಾರಣ ದಂಡ ವಿಧಿಸಿದೆ.
PublicNext
18/11/2020 03:58 pm