ವಿಜಯಪುರ:ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮಸೂದೆ ಮಂಡಿಸುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ. ನಗರದ ಹೊರ ವಲಯದ ಭೂತನಾಳ ಬಳಿ ಇರುವ ಕೆಎಂಎಫ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡಿದರೆ ಉಂಟಾಗುವ ಸಾಧಕ-ಬಾಧಕ ಕುರಿತು ಅಧ್ಯಯನ ನಡೆಸಲು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ಸಮಿತಿ ಈಗಾಗಲೇ ಗೋಹತ್ಯೆ ನಿಷೇಧಗೊಳಿಸಿದ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ ಸದ್ಯದರಲ್ಲೇ ಸಮಿತಿಯು ವರದಿ ಸಲ್ಲಿಸಲಿದೆ. ಗೋವು ನಮ್ಮೆಲ್ಲರನ್ನು ಸಲಹುವ ಮಾತೆ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. ಕೋವಿಡ್-೧೯ನಿಂದ ಕಾಯಿದೆ ಜಾರಿ ವಿಳಂಬವಾಗಿದೆ. ಮುಂದಿನ ಅಧಿವೇಶನದಲ್ಲಿ ಕಾಯಿದೆ ಜಾರಿ ನಿಶ್ಚಿತ ಎಂದು ಪ್ರಭು ಚೌಹಾಣ್ ತಿಳಿಸಿದರು.
PublicNext
18/11/2020 01:00 pm