ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.5ಕ್ಕೆ ರಾಜ್ಯ ಬಂದ್‌ಗೆ ಕನ್ನಡಪರ ಸಂಘಟನೆಗಳ ಕರೆ

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕನ್ನಡ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಡಿಸೆಂಬರ್‌ 5ರಂದು ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ರಾಜ್ಯೋತ್ಸವದ ದಿನವನನ್ನು ಮರಾಠಿಗರು ಕರಾಳ ದಿನ ಆಚರಿಸುತ್ತಾರೆ. ಹೀಗಿದ್ದರೂ ಅವರಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ 50 ಕೋಟಿ ರೂ. ಅನುದಾನ ನೀಡಿರುವ ಸರ್ಕಾರದ ತೀರ್ಮಾನ ಖಂಡನೀಯ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವ ನಿರ್ಧಾರವನ್ನು ನ.27ರವರೆಗೂ ಹಿಂಪಡೆಯಲು ಸರ್ಕಾರಕ್ಕೆ ಗಡುವು ನೀಡಲಾಗಿದೆ. ಒಂದು ವೇಳೆ ಅಷ್ಟರೊಳಗೆ ನಿರ್ಧಾರ ಹಿಂಪಡೆಯದೇ ಹೋದರೆ ಡಿ.5ರಂದು ಕರ್ನಾಟಕ ಬಂದ್ ನಡೆಸಲಾಗುತ್ತದೆ ಎಂದು ಆಗ್ರಹಿಸಿವೆ.

Edited By : Vijay Kumar
PublicNext

PublicNext

18/11/2020 08:09 am

Cinque Terre

60.6 K

Cinque Terre

5

ಸಂಬಂಧಿತ ಸುದ್ದಿ