ಚಿತ್ರದುರ್ಗ: ಲಿಂಗಾಯತ ಮತ್ತು ವೀರಶೈವರ ನಡುವೆ ಜಗಳವಿದೆ. ಈ ಹಿನ್ನೆಲೆ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಎಂಬ ಹೆಸರನ್ನು ಬದಲಾಯಿಸಬೇಕು ಎಂದು ಸಾಣೆಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ನಿಗಮಗಳು ಚುನಾವಣೆಯ ಅಸ್ತ್ರಗಳಾಗಬಾರದು, ನಿಜವಾಗಿಯೂ ಸಂತ್ರಸ್ತ ಸಮುದಾಯಗಳಿಗೆ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಹಿಂದುಳಿದ ಜನರಿಗೆ ನಿಗಮಗಳ ಸ್ಥಾಪನೆ ಅಗತ್ಯವಿದೆ. ರಾಜ್ಯದಲ್ಲಿ ಈಗಾಗಲೇ ದೇವರಾಜ ಅರಸು, ಅಂಬೇಡ್ಕರ್, ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮಗಳಿವೆ. ಹಾಗೆಯೇ ಬಸವೇಶ್ವರ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಿಸಲು ಒತ್ತಾಯಿಸುತ್ತೇನೆ ಎಂದು ಒತ್ತಾಯಿಸಿದರು.
PublicNext
18/11/2020 07:24 am