ಕೋಲಾರ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠರ ಅಭಿವೃದ್ಧಿ ನಿಗಮ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೋಲಾರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟಿಲ್ ಹೇಳಿದ್ದಾರೆ.
ಕೋಲಾರದ ಕೃಷಿ ಇಲಾಖೆ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ ವೇಳೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿರುವ ಎಲ್ಲಾ ಜನಾಂಗದವರು ಇದ್ದಾರೆ. ಹೀಗಾಗಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸಿಎಂ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕುವೆಂಪು ಅವರು ಹೇಳಿದ ಹಾಗೆ ಕರ್ನಾಟಕವು ಸರ್ವಜನಾಂಗದ ಬೀಡಾಗಿದೆ. ಸುಮ್ಮನೇ ಈ ವಿಚಾರವಾಗಿ ತಪ್ಪು ಗ್ರಹಿಕೆ ಬೇಡ. ಅಲ್ಲದೇ ಮರಾಠಿಗರಲ್ಲಿಯೂ ಸಹ ಕಡುಬಡವರಿದ್ದಾರೆ ಅವರು ಸಹ ಬದುಕಬೇಕು. ಮರಾಠಿ ಮಾತನಾಡಿದ ತಕ್ಷಣ ಅವರಾರೂ ನಮ್ಮ ವೈರಿಗಳಲ್ಲ. ಇದರಿಂದ ಅವರನ್ನು ಕಡೆಗಣಿಸಲು ಆಗುವುದಿಲ್ಲ ಎಂದು ಹೇಳಿದರು.
PublicNext
17/11/2020 09:41 pm