ಹಾಸನ: ಹಾಸನಾಂಬೆಗೆ ಪ್ರತಿ ವರ್ಷ ಭಕ್ತರು ವಿವಿಧ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದೇ ರೀತಿ ಈ ಬಾರಿ ವ್ಯಕ್ತಿಯೊಬ್ಬ ಕುಡಿಯುವುದನ್ನು ಬಿಡುತ್ತೇನೆ. ಆದ್ರೆ ದಿನಕ್ಕೆ ಸ್ವಲ್ಪ ಮಾತ್ರ ಕುಡಿಯುತ್ತೇನೆ ಎಂದು ವಿಭಿನ್ನವಾಗಿ ಬೇಡಿಕೊಂಡಿದ್ದಾನೆ.
ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನದ ಬಾಗಿಲು ಮುಚ್ಚಿದ್ದು, ಆಡಳಿತ ಮಂಡಳಿ ಭಕ್ತರು ದೇವಿಗೆ ಸಲ್ಲಿಸಿರುವ ಕೋರಿಕೆ ಹಾಗೂ ಕಾಣಿಕೆಯನ್ನು ಪರಿಶೀಲಿಸಿದ್ದಾರೆ. ತರಹೇವಾರಿ ಕೋರಿಕೆಯ ಪತ್ರಗಳು ಬಂದಿದ್ದು, ಇದರಲ್ಲಿ ಕುಡುಕನೊಬ್ಬನ ವಿಭಿನ್ನ ಪ್ರಾರ್ಥನೆ ಎಲ್ಲರ ಗಮನ ಸೆಳೆದಿದೆ. ಕುಡಿಯುವುದನ್ನು ಬಿಡುತ್ತೇನೆ. ಆದರೆ ಸಂಜೆ ಸ್ವಲ್ಪ ಸ್ವಲ್ಪವೇ ಕುಡಿಯುತ್ತೇನೆ ಎಂದು ಬರೆದು ಹಾಕಿದ್ದಾನೆ.
PublicNext
17/11/2020 07:21 pm