ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮರಳಿ ಕೊಡಬೇಕೆಂಬ ಆಗ್ರಹದೊಂದಿಗೆ ಹೋರಾಟ ಆರಂಭಿಸಿರುವ 'ಗುಪ್ಕರ್ ಘೋಷಣೆ' ರಾಜಕೀಯ ಪಕ್ಷಗಳ ವಿರುದ್ಧ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಗುಪ್ಕರ್ ಗ್ಯಾಂಗ್' ಪರದೇಶಗಳ ನೆರವು ಬಯಸುತ್ತಿದೆ. ಈ ಮುಂಚೆಯಂತೆ ಕಣಿವೆಯಲ್ಲಿ ಮತ್ತೆ ಅಶಾಂತಿಯ ವಾತಾವರಣ ನಿರ್ಮಿಸಲು ಹುನ್ನಾರ ನಡೆಸಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ಗುಪ್ಕರ್ ಘೋಷಣೆಗೆ ಸಹಿ ಮಾಡಿರುವ ಕಣಿವೆಯ ರಾಜಕೀಯ ಪಕ್ಷಗಳು ವಿದೇಶಿ ನೆರವಿಗೆ ಹಾತೊರೆಯುತ್ತಿವೆ. ಮತ್ತು ಅಲ್ಲಿನ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿವೆ. ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅಮಿತ್ ಶಾ ಸರಣಿ ಟ್ವೀಟ್ ಮಾಡಿದ್ದಾರೆ. ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ 'ಗುಪ್ಕರ್ ಗ್ಯಾಂಗ್' ವಿದೇಶಿ ನೆರವಿನ ನಿರೀಕ್ಷೆಯಲ್ಲಿದೆ ಎಂದು ಗುಡುಗಿದ್ದಾರೆ.
ಇನ್ನು ಅಮಿತ್ ಶಾ ಸರಣಿ ಟ್ವೀಟ್‌ಗಳಿಗೆ ಉತ್ತರ ನೀಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಬಿಜೆಪಿ ಇಂತಹ ಸುಳ್ಳುಆರೋಪಗಳನ್ನು ಹೊರಿಸುತ್ತಾ ನಮ್ಮ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ ಎಂದು ಅಸಮಾಧಾನಗೊಂಡಿದ್ದಾರೆ.
PublicNext
17/11/2020 05:38 pm