ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯಪ್ರದೇಶ: ಶೀಘ್ರದಲ್ಲೇ 'ಲವ್ ಜಿಹಾದ್' ವಿರುದ್ಧ ಕಾನೂನು ಜಾರಿ- ತಪ್ಪಿತಸ್ಥರಿಗೆ 5 ವರ್ಷ ಜೈಲು

ಭೋಪಾಲ್: 'ಲವ್ ಜಿಹಾದ್' ನಿಯಂತ್ರಿಸಲು ಮಧ್ಯಪ್ರದೇಶ ಸರ್ಕಾರ ಶೀಘ್ರದಲ್ಲೇ ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಲವ್‌ ಜಿಹಾದ್ ವಿರುದ್ಧ ಕಠಿಣ ಕಾನೂನು ಹಾಗೂ ತಪ್ಪಿತಸ್ಥರಿಗೆ 5 ವರ್ಷ ತನಕ ಸಜೆ ವಿಧಿಸಲಾಗುವುದು. ಈ ಕುರಿತು ಮಸೂದೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

"ಲವ್‌ ಜಿಹಾದ್ ಪ್ರಕರಣದಲ್ಲಿ ಜಾಮೀನುರಹಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ ಪ್ರಕರಣಗಳಲ್ಲಿ ಸಹಕರಿಸಿದವರನ್ನೂ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗುವುದು. ವಿವಾಹ ಉದ್ದೇಶದ ಸ್ವಯಂಪ್ರೇರಿತ ಮತಾಂತರಕ್ಕಾಗಿ ಕಲೆಕ್ಟರ್ ಬಳಿ ಒಂದು ತಿಂಗಳು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಲಿದೆ'' ಎಂದು ಮಿಶ್ರಾ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

17/11/2020 04:28 pm

Cinque Terre

42.07 K

Cinque Terre

10

ಸಂಬಂಧಿತ ಸುದ್ದಿ