ಬೆಂಗಳೂರು: ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿದ್ದ ಕರ್ನಾಟಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
ಉಪಚುನಾವಣೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಬಿಜೆಪಿ ಮಂಗಳೂರಿನ ಡಾ.ಕೆ.ನಾರಾಯಣ್ ಅವರಿಗೆ ಟಿಕೆಟ್ ನೀಡಿದೆ. ನಟಿ ಖುಷ್ಬೂ ಹಾಗೂ ಶಂಕರಪ್ಪ ಅವರಿಗೆ ಟೀಕೆ ನೀಡುತ್ತಾರೆ ಎನ್ನುವ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್ ಸಕ್ರಿಯ ಕಾರ್ಯಕರ್ತ ನಾರಾಯಣ್ ಅವರಿಗೆ ಟೀಕೆಟ್ ನೀಡಿ ಅಚ್ಚರಿ ಮೂಡಿಸಿದೆ.
ಮಂಗಳೂರು ಮೂಲದ ಉದ್ಯಮಿ ಹಾಗೂ ದೇವಾಂಗ ಸಮುದಾಯದ ಮುಖಂಡರೂ ಆಗಿದ್ದಾರೆ. ಬಿಜೆಪಿಯಿಂದ 50 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ಸಕ್ರೀಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಡಾ. ಕೆ ನಾರಾಯಣ್ ಅವರು ದೇವಾಂಗ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಿಟಿಂಗ್ ಕಂಪನಿ span print ಓನರ್ ಆಗಿದ್ದಾರೆ. ಅಲ್ಲದೇ ನಾರಾಯಣ್ ಅವರು ಲ್ಯಾಣ ನಿಧಿ, ವಿದ್ಯಾ ನಿಧಿ ಬ್ಯಾನರ್ ಅಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಾ ಬಂದಿದ್ದಾರೆ.
PublicNext
17/11/2020 04:12 pm