ಮೈಸೂರು- ಸಂಸದರಾದ ಸುಮಲತಾ ಹಾಗೂ ಪ್ರತಾಪ್ ಸಿಂಹ ಅವರ ನಡುವೆ ಬಹಿರಂಗ ಟೀಕಾ ಪ್ರಹಾರ ಮುಂದುವರೆದಿದೆ. ನಿನ್ನೆಯಷ್ಟೇ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಂಸದೆ ಸುಮಲತಾ ಪ್ರತಾಪ್ ಸಿಂಹ ಒಬ್ಬ ಪೇಟೆ ರೌಡಿ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಸುಮಲತಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ, ಅವರ ಹೇಳಿಕೆ ಬಗ್ಗೆ ನನಗೆ ಯಾಕೋ ನಂಬಿಕೆ ಇಲ್ಲ. ಅವರು ಸಿನಿಮಾ ಜಗತ್ತು, ಬಣ್ಣದ ಲೋಕದಿಂದ ಬಂದವರು. ಮಾಧ್ಯಮದವರು ಪ್ರಶ್ನೆ ಕೇಳಿದಾಗ ನಾಗರಹಾವು ಸಿನಿಮಾದ ಜಲೀಲ ನೆನಪಾಗಿ ಅವರು ಡೈಲಾಗ್ ಹೇಳಿದ್ದಾರೆ. ನಾನು ಯಾವ ಸ್ಟಾರ್ ಕೂಡ ಅಲ್ಲ. ಯಾವ ಅಭಿಮಾನಿಯೂ ನನಗೆ ಓಟ್ ಹಾಕಿಲ್ಲ. ನನ್ನ ಕೆಲಸವೇ ನನ್ನನ್ನು ಕಾದಿದೆ. ಹಾಗಾಗಿ ನಾನು ಬಸವಣ್ಣನವರ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟವನು ಎಂದು ಪ್ರತಾಪ್ ಸಿಂಹ ತೀಕ್ಷ್ಣವಾಗಿ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.
PublicNext
17/11/2020 02:58 pm