ನವದೆಹಲಿ- ಸಾಲು ಸಾಲು ಸೋಲುಗಳ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬೇಗುದಿ ಹೆಚ್ಚುತ್ತಲೇ ಇದೆ. ಕಾರ್ಯಕರ್ತರು ತಮ್ಮದೇ ನಾಯಕರ ಮೇಲೆ ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡುವಂತೆ ಹಿರಿಯ ನಾಯಕ ಕಪಿಲ್ ಸಿಬಲ್, ದೇಶದಲ್ಲಿ ಕಾಂಗ್ರೆಸ್ ಪರ್ಯಾಯ ಪಕ್ಷವಾಗಿ ಉಳಿದಿಲ್ಲ ಎಂದಿದ್ದಾರೆ.
ಪರಿಣಾಮಕಾರಿ ಪರ್ಯಾಯ ಆಡಳಿತ ನೀಡಬಲ್ಲ ಪಕ್ಷ ಕಾಂಗ್ರೆಸ್ ಎಂಬುದನ್ನು ಬಿಹಾರದ ಜನರಷ್ಟೇ ಅಲ್ಲ; ದೇಶದ ಜನರೂ ಒಪ್ಪುತ್ತಿಲ್ಲ. ದೇಶದಲ್ಲಿ ಎಲ್ಲೆಲ್ಲಿ ಉಪಚುನಾವಣೆಗಳು ನಡೆದಿವೆಯೋ ಅಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಂಡಿಲ್ಲ. ಬಿಹಾರದ ಫಲಿತಾಂಶವನ್ನೇ ನೋಡಿದ್ರೆ ತಿಳಿಯುತ್ತದೆ. ಅಲ್ಲಿನ ಜನಕ್ಕೆ ಆರ್ ಜೆ ಡಿ ಪರ್ಯಾಯ ಪಕ್ಷವಾಗಿದೆ ಹೊರತು ಕಾಂಗ್ರೆಸ್ ಅಲ್ಲ. ಉಳಿದ ಬಹುತೇಕ ರಾಜ್ಯಗಳಲ್ಲೂ ಹೀಗೆಯೇ ಆಗಿದೆ. ಈ ಬಗ್ಗೆ ಕಳೆದ 6 ವರ್ಷಗಳಿಂದ ಕಾಂಗ್ರೆಸ್ ಆತ್ಮಾವಲೋಕ ಮಾಡಿಕೊಂಡಿಲ್ಲ. ಈಗ ಆತ್ಮಾವಲೋಕನ ಮಾಡಿಕೊಳ್ಳುವುದರಲ್ಲಿ ನಾವು ಯಾವ ಭರವಸೆ ಇಟ್ಟುಕೊಳ್ಳಬಹುದು ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
PublicNext
16/11/2020 06:21 pm