ಭೋಪಾಲ್: ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಮಧ್ಯಪ್ರದೇಶದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ವಿನೋದ್ ದಗಾ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಬೆತುಲ್ ಕ್ಷೇತ್ರದ ಮಾಜಿ ಶಾಸಕ ವಿನೋದ್ ದಗಾ ಅವರು ನವೆಂಬರ್ 12ರಂದು ಮೃತಪಟ್ಟಿದ್ದಾರೆ. ಅವರು ಪೂಜೆ ಸಲ್ಲಿಸಿ ಕೆಳಗೆ ಬಿದ್ದು ಮೃತಪಟ್ಟ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ವಿನೋದ್ ದಗಾ ಪ್ರತಿನಿತ್ಯದಂತೆ ಕಳೆದ ಗುರುವಾರ ಬೆಳಗ್ಗೆ ಬೆತುಲ್ನಲ್ಲಿರುವ ಜೈನರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
PublicNext
16/11/2020 11:45 am