ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಸಿಎಂ ಅಂಕಲ್ ನಮ್ಮನೆಯಲ್ಲಿ ಹಬ್ಬನೇ ಇಲ್ಲ, ದಯವಿಟ್ಟು ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್'

ಬೆಂಗಳೂರು: ಸರಿಯಾಗಿ ವೇತನ ಸಿಗದೆ ಬಿಎಂಟಿಸಿ ನೌಕರರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಬ್ಬಕ್ಕೂ ರಾಜ್ಯ ಸರ್ಕಾರ ವೇತನ ನೀಡಿಲ್ಲ. ಹೀಗಾಗಿ ಬಿಎಂಟಿಸಿ ನೌಕರರ ಮಕ್ಕಳು ಕಣ್ಣೀರು ಹಾಕಿದ್ದಾರೆ.

‘ಸಿಎಂ ಅಂಕಲ್ ಎಲ್ಲರ ಮನೆಯಲ್ಲೂ ಹಬ್ಬ ಮಾಡುತ್ತಿದ್ದಾರೆ. ನಮ್ಮ ಮನೆಯಲ್ಲಿ ಹಬ್ಬನೇ ಇಲ್ಲ. ನಮ್ಮಪ್ಪನಿಗೆ ಹೊಸ ಬಟ್ಟೆ ತೆಗದುಕೊಂಡು ಬಾ ಅಥ ಹೇಳಿದರೆ ಹಣ ಇಲ್ಲ ಎನ್ನುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನ ಮನೆಯವರು ಹಬ್ಬ ಆಚರಿಸುತ್ತಿದ್ದಾರೆ. ಆದರೆ ನಮಗೆ ಹಬ್ಬನೇ ಇಲ್ಲ. ದಯವಿಟ್ಟು ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್' ಎಂದು ಬಿಎಂಟಿಸಿ ಮಕ್ಕಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Edited By : Vijay Kumar
PublicNext

PublicNext

16/11/2020 11:25 am

Cinque Terre

82.08 K

Cinque Terre

8

ಸಂಬಂಧಿತ ಸುದ್ದಿ