ಹಾಸನ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಇಂದು ಬೆಳಗ್ಗೆ 6:45ರ ಸುಮಾರಿಗೆ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಹಾಸನಾಂಬೆ ದರ್ಶನ ಪಡೆಯಲು ಇಂದು ಕೊನೆಯ ದಿನವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲಕ್ಕೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಗಿಲು ಹಾಕಲಾಗುತ್ತದೆ.
ದೇವಿಯ ದರ್ಶನದ ಬಳಿಕ ಮಾತನಾಡಿದ ಅವರು, ಇದೊಂದು ಪುಣ್ಯಕ್ಷೇತ್ರ, ನಂಬಿಕೆ ಪದಕ್ಕೆ ಪವಿತ್ರ ಧರ್ಮಕ್ಷೇತ್ರಗಳೇ ಸಾಕ್ಷಿ. ದೇವಿ ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ. ನಮ್ಮಂಥವರಿಗೆ, ರಾಜ್ಯದ ಮಂದಿಗೆ ಇರುವ ಎಲ್ಲ ನೋವನ್ನು ಪರಿಹಾರ ಮಾಡಲಿ ಅಂತ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.
PublicNext
16/11/2020 09:50 am