ಬೆಂಗಳೂರು: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ, ನಿರ್ಮಾಪಕ ಸಾರಾ ಗೋವಿಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೀಪಾವಳಿ ಸಂದರ್ಭ ರಾಜ್ಯ ಸರ್ಕಾರ ಇಂತಹ ಕೊಡುಗೆ ನೀಡುತ್ತದೆ ಎಂದು ಭಾವಿಸಿರಲಿಲ್ಲ. ಕನ್ನಡ ರಾಜ್ಯೋತ್ಸವದ ದಿನದಂದು ಎಂಇಎಸ್ ಮುಖಂಡರು, ಸದಸ್ಯರು ಕರಾಳ ದಿನ ಆಚರಿಸುತ್ತಾರೆ. ಹೀಗಿದ್ದರೂ ಮರಾಠಿಗರ ಪರ ಸರ್ಕಾರ ಮೃದು ಧೋರಣೆ ತೋರುತ್ತಿದೆ. ಕನ್ನಡ ಪ್ರಾಧಿಕಾರ ಮುಚ್ಚಿಸಲು ಮರಾಠಿ ಪ್ರಾಧಿಕಾರ ಆರಂಭಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಬೆಳವಣಿಗೆಯನ್ನು ಯಾವುದೇ ಕನ್ನಡಿಗರು ಸಹಿಸುವುದಿಲ್ಲ. ಹೀಗಾಗಿ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
PublicNext
15/11/2020 06:43 pm