ಬುಲಂದ್ ಶಹರ್(ಉತ್ತರ ಪ್ರದೇಶ)- ಅನಧಿಕೃತ ಪಟಾಕಿ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಉತ್ತರ ಪ್ರದೇಶದ ಖುರ್ಜಾ ನಗರದ ಪೊಲೀಸರು ಬಂಧಿಸಿದ್ದರು. ಅಪ್ಪನನ್ನು ಬಂಧಿಸಿದ ಪೊಲೀಸರಿಗೆ ಮನವಿ ಮಾಡಿದ್ದ ಪುಟಾಣಿ ಮಗಳು ಅಪ್ಪನನ್ನು ಬಿಟ್ಟುಬಿಡಿ ಎಂದಿದ್ದಳು. ಪೊಲೀಸ್ ಜೀಪಿನಲ್ಲಿ ತನ್ನ ಅಪ್ಪನನ್ನು ಕರೆದೊಯ್ಯುವಾಗ ಆಕೆ ಜೀಪಿನ ಬಾಗಿಲು ಹಿಡಿದು ಅತ್ತು ಗೋಗರೆದಿದ್ದಳು.
ಈ ವಿಷಯ ತಿಳಿದ ಸಿಎಂ ಯೋಗಿ ಆದಿತ್ಯನಾಥ್ ಬಾಲಕಿಯ ತಂದೆಯನ್ನು ಬಿಡುಗಡೆ ಮಾಡುವಂತೆ ತಮ್ಮ ಆಪ್ತ ಸಹಾಯಕನ ಮೂಲಕ ಹೇಳಿಸಿದ್ದಾರೆ. ಸಿಎಂ ಆದೇಶದಂತೆ ಖುರ್ಜಾ ಪೊಲೀಸರು ಪಟಾಕಿ ವ್ಯಾಪಾರಸ್ಥನನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ದೀಪಾವಳಿ ಹಬ್ಬಕ್ಕೆ ಸಿಹಿತಿಂಡಿಯ ಬಾಕ್ಸ್ ಕೂಡ ಕೊಟ್ಟಿದ್ದಾರೆ.
PublicNext
15/11/2020 10:05 am