ಬೆಂಗಳೂರು- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಗೆ ಹೈಕಮಾಂಡ್ ನೀಡಿರುವ ಹೊಸ ಜವಾಬ್ದಾರಿಯು ಹೊಸ ಸಂಕಟ ತಂದಿಟ್ಟಿದೆ.
ಸಿ ಟಿ ರವಿ ಅವರಿಗೆ ಗೋವಾ, ಮಹಾರಾಷ್ಟ್ರ ಹಾಗೂ ತಮಿಳು ನಾಡು ರಾಜ್ಯಗಳ ಬಿಜೆಪಿ ಉಸ್ತುವಾರಿ ನೀಡಲಾಗಿದೆ.
ತಮಿಳು ನಾಡು ಹಾಗೂ ಗೋವಾ ರಾಜ್ಯದೊಂದಿಗೆ ಈಗ ಕರ್ನಾಟಕವು ಜಲವಿವಾದಗಳನ್ನು ಹೊಂದಿದೆ. ಈ ಕುರಿತಾಗಿ ಸಿ ಟಿ ರವಿ ಏನೇ ಹೇಳಿಕೆ ಕೊಟ್ಟರೂ ಅದು ಒಂದಿಲ್ಲೊಂದು ರೀತಿಯಲ್ಲಿ ವಿವಾದಾಸ್ಪದವಾಗಲಿದೆ. ಅದರಲ್ಲೂ ಮಹಾದಾಯಿ ವಿಚಾರದಲ್ಲಿ ಕನ್ನಡಿಗರಾದ ಸಿ ಟಿ ರವಿ ಕನ್ನಡಿಗರ ಪರವಾಗಿಯೇ ನಿಲುವು ತಾಳಬೇಕಿದೆ. ಕಾವೇರಿ ವಿಚಾರವಾಗಿಯೂ ಇದೇ ಸ್ಥಿತಿ ಇದೆ. ಹೀಗಾಗಿ ಈ ಸಮಸ್ಯೆಯನ್ನು ರವಿ ಅವರು ಹೇಗೆ ನಿಭಾಯಿಸುತ್ತಾರೆಂಬುದೇ ಸದ್ಯದ ಪ್ರಶ್ನೆಯಾಗಿದೆ.
PublicNext
14/11/2020 04:16 pm