ಬೆಂಗಳೂರು- ಆರ್ ಎಸ್ ಎಸ್ ಎಂದರೆ ಒಂದು ಜಾತಿ ಸಂಘಟನೆ. ಅದು ಹಿಂದೂ ಸಂಘಟನೆಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್ ಎಸ್ ಎಸ್ ಮೇಲೆ ವಾಗ್ದಾಳಿ ನಡೆಸಿದರು.
ಮಕ್ಕಳ ದಿನಾಚರಣೆ ಹಾಗೂ ಜವಾಹರಲಾಲ್ ನೆಹರು ಜನ್ಮದಿನ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿದ್ದರಾಮಯ್ಯ, ನಾವೆಲ್ಲ ಹಿಂದೂಗಳಲ್ವಾ? ಅವರೊಬ್ಬರೇನಾ ಹಿಂದೂ? ನೀವೂ ಕೂಡ ಹೇಳ್ಬೇಕು ಕೂತ್ಕೊಳ್ರಯ್ಯಾ ನಾವು ಹಿಂದೂ ಅಂತ. ಗಾಂಧೀಜಿ, ನೆಹರು ಹಿಂದೂ ಅಲ್ವಾ? ಎಂದು ತಮ್ಮದೇ ಗತ್ತಿನಲ್ಲಿ ಪ್ರಶ್ನಿಸಿದರು.
ಬಿಜೆಪಿಯವರು ಚರಿತ್ರೆಯನ್ನು ತಿರುಚಿ ಇಡುತ್ತಿದ್ದಾರೆ. ಸ್ವಾತಂತ್ರ್ಯಕ್ಕೂ ಮುನ್ನ ಬಿಜೆಪಿ ಎಲ್ಲಿತ್ತು? ಸಂವಿಧಾನ ವಿಕೃತಗೊಳಿಸಲು ಹೋದವರಾರು? ಹೆಗಡೆವಾರ್, ಗೋಲ್ವಾಳ್ಕರ್ ಪ್ರಧಾನಿ ಆಗಿದ್ದಿದ್ದರೆ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಹುಟ್ಟುತ್ತಿತ್ತು. ಭಾರತದ ಅತ್ಯಂತ ಸುಳ್ಳಿನ ಪ್ರಧಾನಿ ನರೇಂದ್ರ ಮೋದಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
PublicNext
14/11/2020 03:56 pm