ಬೆಂಗಳೂರು- ರಾಜಕಾರಣದಲ್ಲಿ ಟೀಕೆ ಸಕಾರಾತ್ಮಕವಾಗಿರಬೇಕು. ಹಾಗೂ ನೈತಿಕತೆಯಿಂದ ಕೂಡಿರಬೇಕು. ಹಾಗಿದ್ದಲ್ಲಿ ಅದಕ್ಕೊಂದು ಅರ್ಥ ಇರುತ್ತೆ. ಆದ್ರೆ ಇತ್ತೀಚೆಗೆ ಕೇವಲ ಬೆರಳೆಣಿಕೆಯಷ್ಟು ರಾಜಕಾರಣಿಗಳು ನೈತಿಕತೆ ಉಳಿಸಿಕೊಂಡಿದ್ದಾರೆ. ನಿನ್ನೆ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸ್ಥಾನ ಆಯ್ಕೆ ವೇಳೆ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಿದ್ದು ಸವದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮಹಿಳೆಯನ್ನು ಎಳೆದಾಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕ ಸಿದ್ದು ಅವರ ಈ ನಡೆಯನ್ನು ಖಂಡಿಸಿದ್ದಾರೆ.
ಆದ್ರೆ ಸುಮಾರು ಒಂದು ವರ್ಷದ ಹಿಂದೆ ಇದೇ ಸಿದ್ದರಾಮಯ್ಯ ಅವರು ತಮ್ಮ ತವರು ಕ್ಷೇತ್ರ ವರುಣಾದಲ್ಲಿ ಜನತಾ ದರ್ಶನ ನಡೆಸಿದ್ರು. ಇದೇ ವೇಳೆ ಅಲ್ಲಿದ್ದ ಮೈಕ್ ಎತ್ತಿಕೊಂಡ ಮಹಿಳೆಯೊಬ್ಬರು ತಮ್ಮ ಊರಿನ ಸಮಸ್ಯೆ ಹೇಳಲಿತ್ನಿಸಿದ್ದರು. ಇದಕ್ಕೆ ಒಮ್ಮಿಂದೊಮ್ಮೆಲೇ ಕುಪಿತರಾದ ಸಿದ್ದರಾಮಯ್ಯ ಆ ಮಹಿಳೆಯ ಕೈಯಲ್ಲಿದ್ದ ಮೈಕ್ ಕಿತ್ತುಕೊಳ್ಳುವ ಭರದಲ್ಲಿ ಅವರ ದಾವಣಿಯನ್ನೂ ಎಳೆದುಬಿಟ್ಟಿದ್ದರು. ಜೊತೆಗೆ ಆ ಮಹಿಳೆ ಮೇಲೆ ನೆರೆದಿದ್ದ ಸಭೆಯಲ್ಲೇ ಕೆಂಡಾಮಂಡಲರಾಗಿದ್ದರು.
ಈಗ ಸಿದ್ದರಾಮಯ್ಯ ಅವರು ಶಾಸಕ ಸಿದ್ದು ಸವದಿ, ಮಹಿಳೆಯನ್ನು ಹಿಡಿದು ಎಳೆದಾಡಿದ್ದನ್ನು ಟೀಕಿಸಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ ಎಂದು ಪ್ರಶ್ನೆ ಮಾಡಿದ್ದಾರೆ?
PublicNext
12/11/2020 09:43 pm