ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಆಗ್ತೀನಿ, ಇನ್ನೂ ಡೇಟ್ ಫಿಕ್ಸ್ ಆಗಿಲ್ಲ: ನ್ಯೂಜಿಲ್ಯಾಂಡ್ ಪ್ರಧಾನಿ

ಕ್ರೈಸ್ಟ್ ಚರ್ಚ್- ನ್ಯೂಜಿಲ್ಯಾಂಡ್ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾಗಿ 2ನೇ ಪ್ರಧಾನಿಯಾಗಿರುವ ಜೆಸಿಂಡಾ ಅರ್ಡೆರ್ನ್ ಈಗ ತಮ್ಮ ಮದುವೆಗಾಗಿ ಸಿದ್ಧತೆ ನಡೆಸಿದ್ದಾರೆ.

40 ವರ್ಷದ ಜೆಸಿಂಡಾ ಪ್ರಖ್ಯಾತ ಟಿವಿ ನಿರೂಪಕ ಕ್ಲಾರ್ಕ್ ಗೇಪೋರ್ಡ್(44) ಅವರನ್ನ ಮದುವೆಯಾಗಲಿದ್ದಾರೆ. ಈ ಜೋಡಿಗೆ ಈಗಾಗಲೇ 2 ವರ್ಷದ ಮಗು ಇದೆ.

ಕೋವಿಡ್- 19 ಸೋಂಕು ನಿಯಂತ್ರಿಸುವಲ್ಲಿ ಅವರು ಕೈಗೊಂಡ ಕ್ರಮಗಳು ವಿಶ್ವಮಾನ್ಯತೆ ಪಡೆದುಕೊಂಡಿದೆ. 2017ರಲ್ಲಿ ಮೊದಲ ಬಾರಿಗೆ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಪ್ರಧಾನಿಯಾಗಿದ್ದಾಗಲೇ ಮಗುವಿನ ತಾಯಿಯಾಗಿದ್ದರು. ಈಗ ಎರಡನೇ ಬಾರಿ ನ್ಯೂಜಿಲ್ಯಾಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

Edited By : Nagaraj Tulugeri
PublicNext

PublicNext

12/11/2020 11:10 am

Cinque Terre

55.85 K

Cinque Terre

5

ಸಂಬಂಧಿತ ಸುದ್ದಿ