ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕನಕಪುರ ಬಂಡೆಯನ್ನ ಡೈನಾಮೆಟ್ ಇಟ್ಟು ಉಡಾಯಿಸಿ ಪುಡಿ ಮಾಡಿದ್ದೇವೆ'

ಬೆಂಗಳೂರು: ಕನಕಪುರ ಬಂಡೆಯನ್ನು ಡೈನಾಮೆಟ್ ಇಟ್ಟು ಉಡಾಯಿಸಿ ಪುಡಿ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್​. ಅಶೋಕ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಕಾಲೆಳೆದಿದ್ದಾರೆ.

ಉಪ ಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಡಿ.ಕೆ.ಶಿವಕುಮಾರ್​ ಜಾತಿ ರಾಜಕಾರಣವನ್ನು ಮುಂದಿಟ್ಟುಕೊಂಡು ಆಟವಾಡಲು ಯತ್ನಿಸಿದರು. ಆದರೆ ಬೆಂಗಳೂರಿನ ಒಕ್ಕಲಿಗರು ಬಿಜೆಪಿ, ಆರ್.ಅಶೋಕ್ ಜೊತೆಗೆ ಇದ್ದಾರೆ ಎಂಬುದು ಈ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ. ಈ ಮೂಲಕ ರಾಜರಾಜೇಶ್ವರಿ ನಗರದ ನಮ್ಮ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಉಪ ಚುನಾವಣೆ ಫಲಿತಾಂಶದ ಬಳಿಕ ಸಿಎಂ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಕಿಡಿಕಾರಿದ ಸಚಿವರು, 'ಉಪ ಚುನಾವಣೆ ಫಲಿತಾಂಶದಿಂದ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಸಂಚಕಾರ ಬಂದೊದಗಿದೆ. ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ' ಎಂದು ಟಾಂಗ್ ನೀಡಿದರು.

Edited By : Vijay Kumar
PublicNext

PublicNext

10/11/2020 05:19 pm

Cinque Terre

76.73 K

Cinque Terre

8

ಸಂಬಂಧಿತ ಸುದ್ದಿ