ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆಯ ಗೆಲುವನ್ನು ಬಿಜೆಪಿ ಮುಖಂಡ ಸಿಟಿ ರವಿ ಅವರು ವಿಶ್ವ ಹಿಂದೂ ಪರಿಷತ್ ಮುಖಂಡ ದಿ. ಡಿ.ಎಸ್.ಕುಟ್ಟಪ್ಪ, ಯೋಗೀಶ್‌ಗೌಡ ಸೇರಿದಂತೆ 10 ಜನರಿಗೆ ಸಮರ್ಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಐದು ವರ್ಷದ ಹಿಂದೆ ಇದೇ ದಿನ ವಿಶ್ವ ಹಿಂದೂ ಪರಿಷತ್ ನಾಯಕ ಕುಟ್ಟಪ್ಪ ಅವರನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಾಯೋಜಿತ ಟಿಪ್ಪು ಜಯಂತಿ ಆಚರಣೆಯಲ್ಲಿ ಕೊಲೆಗೈದಿದ್ದರು. ಶಿರಾ ಮತ್ತು ರಾಜರಾಜೇಶ್ವರಿನಗರ ವಿಜಯಗಳನ್ನು ಕಾಂಗ್ರೆಸ್ ಆಳ್ವಿಕೆಯಲ್ಲಿ ಕೊಲೆಯಾದ ಕುಟ್ಟಪ್ಪ ಮತ್ತು ಇತರ ಹಿಂದೂ ಕಾರ್ಯಕರ್ತರಿಗೆ ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
PublicNext
10/11/2020 04:03 pm