ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಉಪಚುನಾವಣೆಯ ಫಲಿತಾಂಶ ಕ್ಷಣ ಕ್ಷಣಕ್ಕೂ ಆಸಕ್ತಿ ಮೂಡಿಸುತ್ತಿದೆ‌. ಶಿರಾ ಹಾಗೂ ಆರ್ ಆರ್ ನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದೆ.

ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಲ್ಕನೇ ಸುತ್ತಿನ ಎಣಿಕೆಯಲ್ಲೂ ತಮ್ಮ ಸಮೀಪದ ಅಭ್ಯರ್ಥಿ ಕುಸುಮಾ ಅವರಿಂದ 9 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.‌ಇನ್ನು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂತಿಮ ಫಲಿತಾಂಶದತ್ತ ಎಲ್ಲ ದೃಷ್ಟಿ ನೆಟ್ಟಿದೆ.

Edited By : Nagaraj Tulugeri
PublicNext

PublicNext

10/11/2020 09:33 am

Cinque Terre

84.54 K

Cinque Terre

4

ಸಂಬಂಧಿತ ಸುದ್ದಿ