ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಇನ್ನು ಮುಂದೆ ನಾಯ್ಸ್‌ಲೆಸ್ ಫ್ರೈಡೇ, ಬ್ಲಡ್‌ಲೆಸ್ ಬಕ್ರೀದ್‌ ನಡೆಯಲಿ'

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರವು ಪಟಾಕಿ ನಿಷೇಧ ಮಾಡಿರುವುದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿರೋಧಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, 'ಹಿಂದೂಗಳು ಸಾಮೂಹಿಕವಾಗಿ ಸೇರುವುದೇ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ, ದಸರಾ-ದುರ್ಗಪೂಜೆ ಮತ್ತು ದೀಪವಾಳಿ ಸಮಯದಲ್ಲಿ. ಆದರೆ ಗಣೇಶ ಹಬ್ಬ ಬಂದ್ರೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ, ದೀಪಾವಳಿ ಬಂದ್ರೆ ನಾಯ್ಸ್ ಲೆಸ್ ದೀಪಾವಳಿ ಮಾಡಿ ಎಂದು ಭೋದನೆ ಮಾಡುತ್ತಾರೆ' ಎಂದು ಕಿಡಿಕಾರಿದ್ದಾರೆ.

'ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ಇವುಗಳ ಜೊತೆಗೆ ನಾಯ್ಸ್ ಲೆಸ್ ಫ್ರೈಡೇ, ಬ್ಲಡ್‌ಲೆಸ್ ಬಕ್ರೀದ್ ಹಾಗೂ ಕ್ರ್ಯಾಕರ್‌ಲೆಸ್ ಡಿಸೆಂಬರ್ 31 ನೈಟ್ ಇವೆಲ್ಲವುಗಳನ್ನು ಮಾಡೋಣ. ಬಕ್ರೀದ್‌ನಲ್ಲಿ ರಕ್ತ ಹರಿಸುವುದು ಬೇಡ. ಡಿಸೆಂಬರ್ 31ರಂದು ಪಟಾಕಿ ಹೊಡೆಯುವುದು ಬೇಡ. ಫ್ರೈಡೇ ಸ್ಪೀಕರಿನಲ್ಲಿ ಕೂಗುವುದು ಬೇಡ. ರಸ್ತೆ ಮೇಲೆ ನಮಾಜ್ ಮಾಡುವುದು ಬೇಡ. ಬೀದಿಯಲ್ಲಿ ಪಟಾಕಿ ಹೊಡೆಯೋದು ಬೇಡ. ನಾವೆಲ್ಲ ಮನೆಯಲ್ಲಿ ದೀಪ ಹಚ್ಚುತ್ತೇವೆ, ಅವರು ಸ್ಪೀಕರ್ ಹಚ್ಚದೇ ನಾಮಾಜ್ ಮಾಡಲಿ ರಸ್ತೆ ಮೇಲೆ ಬೇಡ' ಎಂದು ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

09/11/2020 09:01 pm

Cinque Terre

109.06 K

Cinque Terre

19