ನವದೆಹಲಿ- ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯದ ನಗೆ ಬೀರಿರುವ ಜೋ ಬೈಡನ್ ಬಗ್ಗೆ ನಟಿ ಕಂಗನಾ ಅಪಸ್ವರ ಎತ್ತಿದ್ದಾರೆ.
ಅವರ ಗೆಲುವಿನ ಬಗ್ಗೆ ಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್ ಬೈಡನ್ ಅವರನ್ನ ಘಜಿನಿ ಬೈಡನ್ ಎಂದಿದ್ದಾರೆ. ಬೈಡನ್ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಪ್ರತಿ ಐದು ನಿಮಿಷಕ್ಕೆ ಅವರ ಡೇಟಾ ಕ್ರ್ಯಾಶ್ ಆಗುತ್ತೆ. ಅವರಿಗೆ ಕೊಟ್ಟಿರೋ ಎಲ್ಲ ಔಷಧಿಗಳನ್ನು ನೋಡಿದ್ರೆ ಅವರು ಒಂದು ವರ್ಷಕ್ಕಿಂತ ಹೆಚ್ಚಿಗೆ ಇರಲ್ಲ. ಶೋ ನಡೆಸೋದು ಕಮಲಾ ಹ್ಯಾರಿಸ್ ಅನ್ನೋದು ಸ್ಪಷ್ಟ. ಒಬ್ಬ ಹೆಣ್ಣು ಉನ್ನತ ಸ್ಥಾನಕ್ಕೆ ಏರಿದರೆ, ಎಲ್ಲಾ ಮಹಿಳೆಯರಿಗೂ ದಾರಿ ಮಾಡಿಕೊಡುತ್ತಾಳೆ. ಈ ಐತಿಹಾಸಿಕ ದಿನಕ್ಕೆ ಚಿಯರ್ಸ್ ಎಂದು ಟ್ವೀಟ್ ಮಾಡಿದ್ದಾರೆ.
PublicNext
09/11/2020 01:02 pm