ಬೆಂಗಳೂರು- ತಾನಿಷ್ಕ್ ಚಿನ್ನಾಭರಣ ಕಂಪನಿಯ ಮೇಲೆ ಸಚಿವ ಸಿ.ಟಿ ರವಿ ಮತ್ತೆ ಗರಂ ಆಗಿದ್ದಾರೆ. ದೀಪಾವಳಿ ಹಬ್ಬದ ಬಗ್ಗೆ ತಾನಿಷ್ಕ್ ಕಂಪನಿ ಜಾಹೀರಾತೊಂದನ್ನು ಪ್ರಸಾರ ಮಾಡುತ್ತಿದೆ. ಇದೇ ಕಾರಣಕ್ಕೆ ಸಿ.ಟಿ ರವಿ ಸಿಡಿಮಿಡಿಗೊಂಡಿದ್ದಾರೆ.
ದೀಪಾವಳಿ ಹಬ್ಬ ಹೇಗೆ ಆಚರಿಸಬೇಕೆಂಬ ಸಲಹೆ ಹಿಂದೂಗಳಿಗೇಕೆ ನೀಡಬೇಕು? ಎಂದು ತಾನಿಷ್ಕ್ ಜ್ಯುವೆಲ್ಲರಿ ಕಂಪನಿಗೆ ಪ್ರಶ್ನಿಸಿದ್ದಾರೆ. ದೀಪಾವಳಿ ಹಬ್ಬವನ್ನು ಹೇಗೆ ಆಚರಿಸೋಣ ಎಂಬ ಜಹೀರಾತನ್ನು ತಾನಿಷ್ಕ್ ಕಂಪನಿಯು ಸದ್ಯ ಪ್ರಸಾರ ಮಾಡುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ ಸಿ.ಟಿ ರವಿ ಹಬ್ಬವನ್ನು ಹೇಗೆ ಆಚರಿಸಬೇಕೆಂಬ ಸಲಹೆ ಹಿಂದೂಗಳಿಗೆ ಏಕೆ ನೀಡಬೇಕು ಎಂದು ಗರಂ ಆಗಿದ್ದಾರೆ.
ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರತ್ತ ಗಮನ ಹರಿಸಬೇಕು. ಆದರೆ ಪಟಾಕಿಗಳನ್ನು ಸಿಡಿಸುವುದನ್ನು ತಡೆಯಲು ನಮಗೆ ಉಪನ್ಯಾಸ ನೀಡಬಾರದು ಎಂದಿದ್ದಾರೆ.
PublicNext
09/11/2020 11:38 am