ತುಮಕೂರು: ರಾಜ್ಯ ರಾಜಕಾರಣದಲ್ಲಿ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಎರಡೂ ಕ್ಷೇತ್ರಗಳಲ್ಲಿಯೂ 3 ಪಕ್ಷಗಳು ಗೆಲುವಿಗಾಗಿ ಹಂಬಲಿಸುತ್ತಿವೆ. ಆದರೆ ಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುವುದು ಫಲಿತಾಂಶದ ಬಳಿಕ ತಿಳಿಯಲಿದೆ.
ಈ ಮಧ್ಯೆ ಬಿಜೆಪಿ ಅಭ್ಯರ್ಥಿಗಳ ಸೋಲಿಗಾಗಿ ಕಾಂಗ್ರೆಸ್ ರಾಜಕೀಯ ದಿಗ್ಗಜರು ಸಕ್ಕತ್ ಪ್ಲಾನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶಿರಾ ಹಾಗೂ ಆರ್ ಆರ್ ನಗರದ ,ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಶಿರಾದಲ್ಲಿ 25 ಸಾವಿರ ,ಆರ್ ಆರ್ ನಗರದಲ್ಲಿ 40 ಸಾವಿರ ಅಂತರದಲ್ಲಿ ಬಿಜೆಪಿಗೆ ಗೆಲುವಾಗಲಿದೆ ನಮ್ಮ ಗೆಲುವು ನಿಶ್ಚಯ. ಚುನಾವಣೆ ವೇಳೆ ಸಿಎಂ ಪ್ರಚಾರ ನಡೆಸಿರೋದು ಸಾಕಷ್ಟು ಪ್ರಭಾವ ಬೀರಿದೆ. ಕಾಂಗ್ರೆಸ್ ನ ಒಳಜಗಳ ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎಂದರು.
ಆರ್.ಆರ್ ನಗರವನ್ನ ಡಿ.ಕೆ ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾವನ್ನ ಸಿದ್ದರಾಮಯ್ಯ ಉಸ್ತುವಾರಿ ವಹಿಸಿಕೊಂಡಿದ್ದರು. ಶಿರಾದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಡಿ.ಕೆ ಶಿವಕುಮಾರ್ ತಲೆಬಿಸಿ ಮಾಡಿಕೊಂಡಿದ್ದರು. ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸುವುದಕ್ಕೆ ಸಿದ್ದರಾಮಯ್ಯ ತಲೆಬಿಸಿ ಮಾಡಿಕೊಂಡಿದ್ದರು.
ಸಿದ್ದರಾಮಯ್ಯ ಶಿರಾದಲ್ಲಿ ಕಾಂಗ್ರೆಸ್ ಗೆಲುವನ್ನ ಯೋಚನೆ ಮಾಡೋ ಬದಲು ಆರ್ ಆರ್ ನಗರವನ್ನ ಸೋಲಿಸೋದು ಹೇಗೆ ಅಂತಾ ತಲೆಕೆಡಿಸಿಕೊಂಡಿದ್ದರು ಎಂದರು. ಗೆದ್ದಾಗ ಇವಿಎಂ ಸರಿ ಇರಲ್ವಾ..? ಇದ್ರಿಂದ ಕಾಂಗ್ರೆಸ್ ನವರಿಗೆ ನಾವು ಸೋಲುತ್ತೇವೆ ಎಂದು ಅರ್ಥವಾಗಿದೆ. ಇವಿಎಂ ದೋಷವಿದ್ದರೇ ಡಿಕೆಶಿ ಸಿದ್ದರಾಮಯ್ಯ ಗೆಲ್ಲುವುದಕ್ಕೆ ನಾವು ಬಿಡುತ್ತಿದ್ದೆವಾ ಎಂದು ಕಟೀಲ್ ಪ್ರಶ್ನಿಸಿದ್ದಾರೆ.
PublicNext
08/11/2020 04:10 pm