ವಾಷಿಂಗ್ಟನ್- ಮ್ಯಾಜಿಕ್ ನಂಬರ್ ಗಿಂತ 18 ಎಲೆಕ್ಟ್ರೋರಲ್ ಮತಗಳನ್ನು ಪಡೆದು ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆರೋಪ ಪ್ರತ್ಯಾರೋಪಗಳ ನಡುವೆ ಇಡೀ ಜಗತ್ತಿನ ಗಮನ ಸೆಳೆದಿದ್ದ ಚುನಾವಣೆಯ ಅಂತಿಮ ಫಲಿತಾಂಶ ಈ ಮೂಲಕ ಹೊರಬಿದ್ದಿದೆ. 284 ಎಲೆಕ್ಟ್ರೋರಲ್ ಮತಗಳನ್ನು ಪಡೆದ ಜೋ ಬೈಡನ್ ಗೆಲುವು ಸಾಧಿಸಿದ್ದಾರೆ. ಇವರ ಎದುರಾಳಿ ಅಭ್ಯರ್ಥಿಯಾಗಿದ್ದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋರಲ್ ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
PublicNext
07/11/2020 10:26 pm