ಹಾಸನ- ನನ್ನನ್ನು ಜೈಲಿಗೆ ಹಾಕಿ. ಅಲ್ಲಿ ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಣ್ಣ ಉಪಚುನಾವಣೆ ಮುಗಿದ ಕೂಡಲೇ ಕೆಇಬಿ ಬಿಲ್ ಹೆಚ್ಚಳ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ಮಾರಾಟ ಮಾಡಲಾಗಿದೆ. ಇದೇ ರೀತಿ ಕೆಇಬಿಯನ್ನು ಯಾವ ಕಂಪನಿಗೆ ಮಾರುತ್ತಾರೋ ಗೊತ್ತಿಲ್ಲ. ಎಂದು ರೇವಣ್ಣ ಸರ್ಕಾರದ ನಡೆ ಮೇಲೆ ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಪ್ರತೀ ಯೂನಿಟ್ ವಿದ್ಯುತ್ ಗೆ 40 ಪೈಸೆ ಹೆಚ್ಚಳ ಮಾಡಿದ್ದಾರೆ. ಅಂದರೆ ಎಷ್ಟು ಆದಾಯ ಬರುತ್ತೆ ಹೇಳಿ? ರಾಜ್ಯದಲ್ಲಿ ದ್ವೇಷ ರಾಜಕಾರಣ ಹೆಚ್ಚಾಗಿದೆ. ಇದು ಬಿಜೆಪಿಗೆ ತಿರುಗುಬಾಣ ಆಗಲಿದೆ. ವಿಪಕ್ಷಗಳನ್ನು ಹತ್ತಿಕ್ಕುವ ಉದ್ದೇಶದಿಂದ ನಾಲ್ಕು ವರ್ಷಗಳ ಹಿಂದಿನ ಕೇಸನ್ನು ಮತ್ತೆ ರೀಓಪನ್ ಮಾಡಿಸಿದ್ದಾರೆ. ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ. ನಾನು ಹೋರಾಟ ಮಾಡ್ತೀನಿ. ಜೈಲಿಗೆ ಹಾಕಲಿ, ಅಲ್ಲೇ ಸರಿಯಾಗಿ ಊಟ ಕೊಡ್ತಾರೆ ಎಂದು ರೇವಣ್ಣ ಹೇಳಿದರು.
PublicNext
06/11/2020 11:54 am