ವಾಷಿಂಗ್ಟನ್- ನಿಜಕ್ಕೂ ನ್ಯಾಯಬದ್ಧ ಮತ ಎಣಿಕೆ ನಡೆದಿದ್ದರೆ ನಾನೇ ಗೆಲ್ಲಬೇಕಿತ್ತು. ಆದ್ರೆ ಡೆಮಾಕ್ರೆಟಿಕ್ ಗಳು ಚುನಾವಣೆಯನ್ನೇ ಕಳವು ಮಾಡಿದ್ದಾರೆ ಎಂದು ಅಮೆರಿಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನ್ಯಾಯಬದ್ಧವಾಗಿ ಮತಗಳನ್ನು ಲೆಕ್ಕ ಹಾಕಿದ್ದೇ ಆದರೆ ನಾನು ಸುಲಭವಾಗಿ ಗೆಲ್ಲುತ್ತಿದ್ದೆ. ಅಕ್ರಮ ಮತಗಳನ್ನು ಲೆಕ್ಕ ಹಾಕಿದರೆ ಅವರು ನಮ್ಮಿಂದ ಚುನಾವಣೆಯನ್ನೇ ಕಳವು ಮಾಡಿದಂತೆ. ಬಹುತೇಕ ಹಾಗೂ ಪ್ರಮುಖ ರಾಜ್ಯಗಳಲ್ಲಿ ಬಹುಮತ ನನ್ನದಾಗಿದೆ. ಅನೇಕ ಅಡೆತಡೆಗಳ ನಡುವೆಯೂ ಜಯ ಸಾಧಿಸಿದ್ದೇವೆ ಎಂದು ಟ್ರಂಪ್ ಹೇಳಿದರು.
ಹಲವು ಸಮೀಕ್ಷೆಗಳ ಪ್ರಕಾರ ಡೆಮಾಕ್ರೆಟಿಕ್ ಪಕ್ಷ ಗೆದ್ದಿಲ್ಲ. ಅದರಲ್ಲಿ ನಮ್ಮ ಪಕ್ಷದ ಗೆಲುವು ಎಂಬ ಫಲಿತಾಂಶ ಬಂದಿದೆ. ಡೆಮಾಕ್ರೆಟಿಕ್ ಪಕ್ಷ ದೊಡ್ಡ ದಾನಿಗಳ, ತಂತ್ರಜ್ಞಾನೋದ್ಯಮಿಗಳ, ಸಿರಿವಂತರ ಪಕ್ಷವಾಗಿದೆ. ಆದರೆ ರಿಪಬ್ಲಿಕನ್ ಪಕ್ಷವು ಅಮೆರಿಕದ ಕಾರ್ಮಿಕರ ಪಕ್ಷವಾಗಿದೆ ಎಂದು ಇದೇ ವೇಳೆ ಟ್ರಂಪ್ ಹೇಳಿದ್ದಾರೆ.
PublicNext
06/11/2020 09:26 am