ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಲಿತಾಂಶ ಬಳಿಕ ವಿಪಕ್ಷ ನಾಯಕನ ಸ್ಥಾನ ಪಲ್ಲಟ

ಬೆಂಗಳೂರು: ಉಪಚುನಾವಣೆ ಫಲಿತಾಂಶದ ಬಂದ ಮೇಲೆ ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾಗುವುದಿಲ್ಲ. ಆದರೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರ ಸ್ಥಾನ ಬದಲಾಗಲಿದೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ದಿಲ್ಲಿ ಮಾಹಿತಿ ಪ್ರಕಾರ ಸಿಎಂ ಬದಲಾವಣೆ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, "ಸಿದ್ದರಾಮಯ್ಯ ಒಬ್ಬ ಪ್ರತಿಪಕ್ಷದ ನಾಯಕರಾಗಿ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಬದಲಾವಣೆ ಆಗುವುದಾಗಿ ದಿಲ್ಲಿಯಿಂದ ಮಾಹಿತಿ ಇದೆ ಎಂದಿದ್ದಾರೆ. ಆದರೆ ಉಪ ಚುನಾವಣೆ ಬಳಿಕ ಪ್ರತಿಪಕ್ಷದ ನಾಯಕರನ್ನು ಬದಲಿಸಲಾಗುತ್ತದೆ. ಕಾಂಗ್ರೆಸ್‌ ಹೈಕಮಾಂಡ್‌ ಈ ಬಗ್ಗೆ ಯೋಚಿಸಬೇಕಾಗುತ್ತದೆ. ಯಾಕೆಂದರೆ, ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಲಿದೆ" ಎಂದ ಯಡಿಯೂರಪ್ಪ ಟಾಂಗ್‌ ಕೊಟ್ಟರು.

Edited By : Nagaraj Tulugeri
PublicNext

PublicNext

05/11/2020 05:44 pm

Cinque Terre

41 K

Cinque Terre

1

ಸಂಬಂಧಿತ ಸುದ್ದಿ