ವಾಷಿಂಗ್ಟನ್- ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವಿಗೆ ಕೇವಲ 6 ಮತಗಳು ಬೇಕಾಗಿವೆ. ಮತ ಎಣಿಕೆಯಲ್ಲಿ ಏರಿಳಿತವಾಗುತ್ತಿದ್ದಂತೆ ಅಭ್ಯರ್ಥಿಗಳ ಎದೆ ಬಡಿತ ಏರಿಳಿತವಾಗುತ್ತಿದೆ. ಯಾರಿಗೆ ಅಮೆರಿಕ ಅಧ್ಯಕ್ಷರ ಪಟ್ಟ ಸಿಗಲಿದೆ ಎನ್ನುವುದು ಈ ಕ್ಷಣಕ್ಕೂ ಕೂಡ ಅನಿಶ್ಚಿತವಾಗಿ ಕಾಣುತ್ತಿದೆ.
ಇನ್ನೂ ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ನಡೆದಿದೆ. ಈ ಪೈಕಿ ಪೆನ್ಸಿಲ್ವೇನಿಯಾ ಹಾಗೂ ವರ್ಜೀನಿಯಾ ರಾಜ್ಯಗಳಲ್ಲಿ ಟ್ರಂಪ್ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ. ಈ ರಾಜ್ಯಗಳಲ್ಲಿ ಟ್ರಂಪ್ ಇದೇ ರೀತಿ ಮುನ್ನಡೆ ಕಾಯ್ದುಕೊಂಡರೆ ಮತ್ತೆ ಅಧ್ಯಕ್ಷರಾಗಲಿದ್ದಾರೆ.
PublicNext
05/11/2020 12:27 pm